ಗಾಜಾ ಪಟ್ಟಿ (ಅರೇಬಿಕ್: قطاع غزة "ಕಿಟಾ ಗಾಜ್ಜಾ'", רצועת עזה ರೆತ್ಜುಅತ್ ಆಜ್ಜಾ) ಮೆಡಿಟೆರೇನಿಯನ್ ಸಮುದ್ರದ ಪೂರ್ವ ಕರಾವಳಿಯಲ್ಲಿ ಸ್ಥಿತವಾಗಿರುವ ಒಂದು ಪ್ರದೇಶ. ಇದರ ನೈರುತ್ಯಕ್ಕೆ ಈಜಿಪ್ಟ್ ಹಾಗು ಉತ್ತರ ಮತ್ತು ಪೂರ್ವಗಳಿಗೆ ಇಸ್ರೇಲ್ ಇವೆ. ಸುಮಾರು ೪೧ ಕಿ.ಮಿ. ಉದ್ದವಿದ್ದು, ೬ರಿಂದ ೧೨ ಕಿ.ಮಿ. ಅಗಲವಿದ್ದು, ಒಟ್ಟು ೩೬೦ ಚದುರ ಕಿ.ಮಿ. ಗಳಷ್ಟು ವಿಸ್ತಾರವನ್ನು ಹೊಂದಿದೆ. ಅಧಿಕೃತವಾಗಿ ಯಾವ ದೇಶಕ್ಕೂ ಸೇರಿಲ್ಲದ ಈ ಪ್ರದೇಶವನ್ನು ಪ್ಯಾಲಸ್ತೀನದ ರಾಷ್ಟ್ರೀಯ ಪ್ರಾಧಿಕಾರವು ಪ್ಯಾಲಸ್ತೀನದ ಪ್ರದೇಶಗಳ ಭಾಗವೆಂದು ಮನ್ನಿಸುತ್ತದೆ. ಜೂನ್ ೨೦೦೭ರಿಂದ ಹಮಾಸ್ ಈ ಪ್ರದೇಶದ ಆಡಳಿತವನ್ನು ನಡೆಸುತ್ತಿದೆ.